ಭಾನುವಾರ, ಮೇ 24, 2015

"ರಂಗಕಲೆಯಲ್ಲಿ ಬಣ್ಣದ ಪಾತ್ರ"



ಬೆಂಗಳೂರು ಆರ್ಟ ಫೌಂಡೇಶನ್ಸಂಸ್ಥೆಯುಸೃಷ್ಟಿ ದೃಶ್ಯಕಲಾ ಮಾಧ್ಯಮ ಅಕಾಡೆಮಿ ಸಹಯೋಗದಲ್ಲಿ ದೊಮ್ಮಲೂರಿನಸೃಷ್ಟಿ ಆಪ್ತ ರಂಗಮಂದಿರದಲ್ಲಿ ಮೇ 24 ರಂದು ಆಯೋಜಿಸಿದ್ದರಂಗಭೂಮಿ ಮತ್ತು ಚಿತ್ರಕಲೆಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ತಿರುನಾವಕರಸುರವರುರಂಗಭೂಮಿ ಮತ್ತು ಚಿತ್ರಕಲೆಯ ಸಂಬಂಧಗಳ ಕುರಿತು ಉಪಯುಕ್ತ ಮಾಹಿತಿಗಳನ್ನು ನೀಡಿದರುಕಲಾಮಂದಿರದಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ತಿರುನಾವಕರಸುರವರು ಖ್ಯಾತ ಚಿತ್ರಕಲಾವಿದರು. ಅವರ ಉಪನ್ಯಾಸದಲ್ಲಿ ರಂಗಕಲೆ, ಚಿತ್ರಕಲೆ, ವ್ಯಕ್ತಿ, ಪಾತ್ರ ಹಾಗೂ ಬಣ್ಣದ ಸಂಬಂಧ ಕುರಿತು ಹಲವಾರು ವಿವರಣೆಗಳನ್ನು ಕೊಟ್ಟರು. ರಂಗಭೂಮಿಯಲ್ಲಿ ತೊಡಗಿಸಿಕೊಂಡವರಿಗೆ, ಹೊಸ ತಲೆಮಾರಿನ ರಂಗನಿರ್ದೇಕರುಗಳಿಗೆ ಹಾಗೂ ಯುವಕಲಾವಿದರುಗಳಿಗೆ ಪ್ರಯೋಜನವಾಗಬಹುದು ಎನ್ನುವ ಸದುದ್ದೇಶದಿಂದ ತಿರುನಾವಕರಸುರವರ ಉಪನ್ಯಾಸದಲ್ಲಿ ಹೇಳಿದ ಐದು ಪ್ರಮುಖ ಅಂಶಗಳನ್ನು ಇಲ್ಲಿ ದಾಖಲಿಸಿದ್ದೇನೆ..., ವರ್ಣತತ್ವಗಳನ್ನು ಮನಮುಟ್ಟುವಂತೆ ತಿಳಿಸಿಕೊಟ್ಟ ತಿರುನಾವಕರಸುರವರಿಗೆ ಧನ್ಯವಾದಗಳು.  ಈ ಉಪನ್ಯಾಸವನ್ನು ಆಯೋಜಿಸಿದ ಸಂಸ ಸುರೇಶ್ ಹಾಗೂ ಓ.ವೆಂಕಟೇಶ್ ರವರಿಗೂ ಧನ್ಯವಾದಗಳು "
                                                                        - ಶಶಿಕಾಂತ ಯಡಹಳ್ಳಿ




1. ರಂಗ-ಚಿತ್ರಕಲೆ ಸಂಬಂಧ : "ರಂಗಭೂಮಿ ಮತ್ತು ಚಿತ್ರಕಲೆಗೆ ಅವಿನಾಭಾವ ಸಂಬಂಧವಿದೆ. ನಾಟಕಕ್ಕೂ ಬಣ್ಣಕ್ಕೂ ಬಿಡಿಸದ ನಂಟು. ನಾಟಕ ಪ್ರದರ್ಶನದ ಬಹು ಮುಖ್ಯ ಅಂಗಗಳಾದ ಪಾತ್ರೋಚಿತ ಪ್ರಸಾಧನ, ಕಾಸ್ಟೂಮ್ ತಯಾರಿ, ಬೆಳಕಿನ ವಿನ್ಯಾಸ, ರಂಗವಿನ್ಯಾಸಗಳಲ್ಲಿ ಬಣ್ಣದ ತರ್ಕಬದ್ದ ಬಳಕೆಯು ನಾಟಕದ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ. ನಾಟಕ ಯಾವುದೇ ಆಗಿರಲಿ ಅದರಲ್ಲಿರುವ ಪ್ರತಿಯೊಂದು ಪಾತ್ರದ ಸ್ವಭಾವವು  ಬಣ್ಣದೊಂದಿಗೆ ಸಂಬಂಧವನ್ನು ಹೊಂದಿದೆ. ಪಾತ್ರಗಳ ಸ್ವಭಾವಕ್ಕೆ ಪೂರಕವಾಗಿ ಬಣ್ಣಗಳನ್ನು ಬಳಸಬೇಕಾಗುತ್ತದೆ. ರಂಗಭೂಮಿಯಲ್ಲಿ ತೊಡಗಿಕೊಂಡವರು ಚಿತ್ರಕಲೆಯ ಕುರಿತು, ವರ್ಣ ಮತ್ತು ವ್ಯಕ್ತಿಸ್ವಭಾವಗಳ ಅಂತರ್ ಸಂಬಂಧ ಕುರಿತು ಅರಿತಿದ್ದರೆ ಉತ್ತಮವಾಗಿ ನಾಟಕವನ್ನು ಕಟ್ಟಬಹುದಾಗಿದೆ "



2. ಮೂಲ ರೇಖೆಗಳು : ಚಿತ್ರಕಲೆ ಎನ್ನುವುದು ಅಸಾಧ್ಯವಾದ ಕಲೆಯೇನಲ್ಲ. ಆರಂಭಿಕ ಹಂತದಲ್ಲಿ ಕೇವಲ ಎಂಟು ರೇಖೆಗಳನ್ನು ರೂಢಿಸಿಕೊಂಡರೆ ಚಿತ್ರಕಲೆ ಕಲಿಯುವುದು ಸುಲಭಸಾಧ್ಯ. ಒಂದು ರೇಖೆಯ ಜೊತೆಗೆ ಇನ್ನೊಂದು ರೇಖೆ ಸೇರಿದಾಗ ಆಕಾರ ರೂಪಗೊಳ್ಳುತ್ತದೆ. ಎರಡು ಲಂಬ, ಎರಡು ಸಮಾನಾಂತರ ಹಾಗೂ ನಾಲ್ಕು ವಿಭಿನ್ನ ವಕ್ರರೇಖೆಗಳು ಯಾವುದೇ ಆಕಾರದ ನಿರ್ಮಿತಿಗೆ ಮೂಲ ಅಗತ್ಯವಾಗಿವೆ. ರೇಖೆಗಳ ಮೇಲೆ ಪ್ರಭುತ್ವ ಸಾಧಿಸುವವರು ಚಿತ್ರಕಲಾವಿದರಾಗಲು ಸಾಧ್ಯ.

3. " V I B G Y O R " : " : ಕಾಮನಬಿಲ್ಲಿನಲ್ಲಿರುವ ಸಪ್ತವರ್ಣಗಳನ್ನು ಅರ್ಥಮಾಡಿಕೊಳ್ಳಬೇಕು. ಅಲ್ಲಿರುವ ಬಣ್ಣಗಳನ್ನು ನೆನಪಿಸಿಕೊಳ್ಳಲು ಸುಲಭವಾದ ಫಾರ್ಮುಲಾ ಎಂದರೆ " V I B G Y O R " = Voilet, Indigo, Blue, Green, Yellow, Orrange, Red  " ಎಂದರೆ  ಕನ್ನಡದಲ್ಲಿ ನೇರಳೆ + ಊದ + ನೀಲಿ + ಹಸಿರು + ಹಳದಿ + ಕೇಸರಿ + ಕೆಂಪು. ಏಳು ಬಣ್ಣಗಳು ಸೇರಿದರೆ ಬಿಳಿಯ ಬಣ್ಣವಾಗುತ್ತದೆ.

4. ವರ್ಣಸಂಕರ ಸಿದ್ದಾಂತ : ಬಣ್ಣಗಳ ಬಳಕೆಯಲ್ಲಿ ವರ್ಣ ಸಿದ್ದಾಂತವನ್ನು ಮೊದಲು ತಿಳಿಯಬೇಕು. ಮೂಲವರ್ಣಗಳು ಅಂದರೆ ಪ್ರಾಥಮಿಕ ಬಣ್ಣಗಳು ಮೂರು. ಅವು ಕೆಂಪು, ಹಳದಿ ಮತ್ತು ನೀಲಿ. ಇದಕ್ಕೆ ಇಂಗ್ಲೀಷಿನಲ್ಲಿಆರ್ಜಿಬಿಬಣ್ಣಗಳು ಎನ್ನುತ್ತಾರೆ. ಬಣ್ಣಗಳನ್ನು ಒಂದಕ್ಕೊಂದು ಮಿಶ್ರಮಾಡಿದಾಗಿ ಮತ್ತೆ ಮೂರು ವರ್ಣಗಳು ಹುಟ್ಟುತ್ತವೆ ಅವುಗಳಿಗೆ ದ್ವಿತೀಯ ವರ್ಣಗಳು ಎನ್ನುತ್ತಾರೆಅವು ಹೀಗಿವೆ. ಕೆಂಪು + ಹಳದಿ =ಕೇಸರಿಕೆಂಪು+ ನೀಲಿ =ನೇರಳೆ, ಹಳದಿ + ನೀಲಿ = ಹಸಿರು.   ಹಾಗೆಯೇ ದ್ವಿತೀಯ ವರ್ಣಗಳನ್ನು ಮತ್ತೆ ಮಿಶ್ರಗೊಳಿಸಿದಾಗ ತ್ರಿತೀಯ ವರ್ಣಗಳು ಸೃಷ್ಟಿಗೊಳ್ಳುತ್ತವೆಅವು ಹೀಗಿವೆ....  ಕೇಸರಿ + ಹಳದಿ =ಆಲಿವ್ ಗ್ರೀನ್ ( ಇಪ್ಪೆ ಎಲೆ ಬಣ್ಣ), ಕೇಸರಿ + ನೇರಳೆ = ಕಂದು ಬಣ್ಣ (ಬ್ರೌನ್ ), ಹಸಿರು + ನೇರಳೆ = ಪಾಟಿ ವರ್ಣ (ಸ್ಲೇಟ್ ಕಲರ್), ಒಟ್ಟಾರೆಯಾಗಿ ಮೂಲವರ್ಣಗಳು ಕೆಂಪು, ಹಳದಿ ಹಾಗೂ ನೀಲಿಯಾದರೆ, ದ್ವಿತೀಯ ವರ್ಣಗಳು ಕೇಸರಿ, ನೇರಳೆ ಹಾಗೂ ಹಸಿರು. ತ್ರಿತೀಯ ವರ್ಣಗಳು ಆಲಿವ್ ಗ್ರೀನ್, ಕಂದು ಹಾಗೂ ಪಾಟಿ ಬಣ್ಣ....    ಯಾವುದೇ ಬಣ್ಣಗಳಿಗೆ ಬಿಳಿ ಬಣ್ಣವನ್ನು ಸೇರಿಸಿದರೆ ತಿಳಿವರ್ಣವಾಗುತ್ತದೆ. ಅದಕ್ಕೆ ಟಿಂಟ್ ಎನ್ನಲಾಗುತ್ತದೆ. ಹಾಗೆಯೇ ಮೇಲೆ ತಿಳಿಸಿದ ಯಾವುದೇ ಬಣ್ಣಕ್ಕೆ ಕಪ್ಪು ಬಣ್ಣವನ್ನು ಸೇರಿಸಿದರೆ ಕಡುವರ್ಣ ಉಂಟಾಗುತ್ತದೆ. ಅದಕ್ಕೆ ಟೋನ್ ಎನ್ನುತ್ತಾರೆ ಟಿಂಟ್ ಮತ್ತು ಟೋನ್ಗಳು ಯಾವ ಅಳತೆಯಲ್ಲಿ ಮಿಶ್ರಗೊಳ್ಳುತ್ತವೆ ಎನ್ನುವುದರ ಮೇಲೆ ಮಿಕ್ಕೆಲ್ಲಾ ಬಣ್ಣಗಳನ್ನು ಸೃಷ್ಟಿಸಬಹುದಾಗಿದೆ.



5. ಬಣ್ಣ-ಪಾತ್ರ ಸಂಬಂಧ : ಬಳಸುವ ಪ್ರತಿ ಬಣ್ಣಕ್ಕೂ ಹಾಗೂ ವ್ಯಕ್ತಿಯ ಸ್ವಭಾವಕ್ಕೂ ನಡುವೆ ಅವಿನಾಭಾವ ಸಂಬಂಧವಿದೆ. ನಾಟಕದಲ್ಲಿ ಬರುವ ಪ್ರತಿ ಪಾತ್ರದ ಗುಣಕ್ಕೂ ಹಾಗೂ ಬಳಸುವ ಬಣ್ಣಗಳಿಗೂ ನಡುವೆ ಸಂಬಂಧವಿದೆ. ಪ್ರತಿಯೊಂದು ಬಣ್ಣದ ಬಳಕೆಗೂ ತನ್ನದೇ ಆದ ಅರ್ಥವಿದೆ. ವರ್ಣತತ್ವಗಳು ನಾಟಕದ ಪಾತ್ರಗಳ ಮೇಲೆ, ದೃಶ್ಯದ ಮೇಲೆ ಅಪಾರವಾದ ಪರಿಣಾಮವನ್ನು ಬೀರುತ್ತವೆ. ರಂಗನಿರ್ದೇಕರಾದವರಿಗೆ ಕಲರ್ಸೆನ್ಸ್ ಅನ್ನುವುದು ಬಹಳ ಮುಖ್ಯವಾಗುತ್ತದೆ. ದೃಶ್ಯದ ಮೂಡ್ ಪರಿಣಾಮಕಾರಿಯಾಗಿ ಪ್ರೇಕ್ಷಕನನ್ನು ಮುಟ್ಟಲು ಬೆಳಕಿನ ಸಂಯೋಜನೆಯಲ್ಲಿಯೂ ಸಹ ಬಣ್ಣದ ಬೆಳಕನ್ನು ಬಳಸಲಾಗುತ್ತದೆ. ಬಳಸುವ ಬಣ್ಣಕ್ಕೂ ಪಾತ್ರ ಹಾಗೂ ದೃಶ್ಯದ ಸೃಷ್ಟಿಗೂ ನಡುವೆ ವಿಶಿಷ್ಟವಾದ ಅರ್ಥವಿದೆ. ಉದಾಹರಣೆಗೆ... ಶೌರ್ಯವನ್ನು ಆರೆಂಜ್ ಬಣ್ಣ ಸಾಂಕೇತಿಸಿದರೆ, ಲೈಟ್ ಆರೇಂಜ್ ವರ್ಣ ತ್ಯಾಗದ ಪ್ರತೀಕವಾಗಿದೆ. ನೀಲಿ ಬಣ್ಣ ಆಕಾಶವನ್ನು, ವಿಶಾಲತೆಯನ್ನು, ಸಂತಸವನ್ನು, ಹೊಂದಾಣಿಕೆ ಮನೋಭಾವವನ್ನು ಹೇಳಿದರೆ...  ಹಸಿರು ಬಣ್ಣ ಭೂಮಿಯನ್ನು, ಸಮೃದ್ದಿಯನ್ನು , ಉಲ್ಲಾಸವನ್ನು ಸಂಕೇತಿಸುತ್ತದೆಕೆಂಪು ಬಣ್ಣ ಕ್ರಾಂತಿ, ಕೋಪ, ಕ್ರೌರ್ಯ, ಹಿಂಸೆ... ಗೆ ರೂಪಕವಾದರೆ ನೇರಳೆ ಬಣ್ಣ ಪ್ಯಾಂಟಸಿ ಕಲ್ಪನೆಗಳಿಗೆ, ಕನಸಿಗೆ.. ಪೂರಕವಾಗಿದೆ. ಕಪ್ಪು ವರ್ಣ ನಿರಾಸಕ್ತಿ , ಸಾವು, ದುರಂತಗಳಿಗೆ ಸಾಕ್ಷಿಯಾಗುತ್ತದೆ. ಹೀಗೆ..... ಪಾತ್ರದ ಸ್ವಭಾವಕ್ಕನುಗುಣವಾಗಿ ಹಾಗೂ ದೃಶ್ಯಗಳ ಮೂಡಿಗೆ ತಕ್ಕಂತೆ ಕಾಸ್ಟೂಮ್, ಮೇಕಪ್, ಸೆಟ್, ಲೈಟಿಂಗ್ ಹಾಗೂ ಪರಿಕರಗಳನ್ನು ವಿನ್ಯಾಸಗೊಳಿಸಬೇಕಾಗುತ್ತದೆ.

ಹೀಗೆ ಬಣ್ಣವಿಲ್ಲದೇ ಬದುಕಿಲ್ಲ, ಬಣ್ಣವಿಲ್ಲದೇ ನಾಟಕವಿಲ್ಲ, ಬಣ್ಣವಿಲ್ಲದೇ ವ್ಯಕ್ತಿಯೂ ಇಲ್ಲ. ಬಣ್ಣ ಎನ್ನುವುದು ಸರ್ವಾಂತರಯಾಮಿಯಾಗಿದೆ. ವರ್ಣ ಸಿದ್ದಾಂತವನ್ನು ರಸಸಿದ್ದಾಂತದ ಜೊತೆಗೆ ಹೋಲಿಸಿ ಅಳವಡಿಸಿಕೊಂಡರೆ ಸೌಂದರ್ಯಪ್ರಜ್ಞೆ ಎನ್ನುವುದು  ಹುಟ್ಟಿ ದೃಶ್ಯವನ್ನು ದೃಶ್ಯಕಾವ್ಯವಾಗಿಸುತ್ತದೆ. ಈ ನಿಟ್ಟಿನಲ್ಲಿ ರಂಗಭೂಮಿಯಲ್ಲಿ ತೊಡಗಿಕೊಂಡಿರುವವರು  ಚಿತ್ರಕಲೆ ಹಾಗೂ ವರ್ಣ ತತ್ವಗಳನ್ನು ಅರಿತು  ನಾಟಕಗಳನ್ನು ಕಟ್ಟಿದರೆ ರೂಪಕತೆ, ರೋಚಕತೆ ಹಾಗೂ ಅನನ್ಯತೆಯನ್ನು ಸಾಧಿಸಬಹುದಾಗಿದೆ. 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ