ಬುಧವಾರ, ನವೆಂಬರ್ 6, 2013

ನಿರ್ದೇಶಕ ಚಿದಂಬರರಾವ್ ಜಂಬೆ ಸಂದರ್ಶನ



ಕೆಳಗಿನವರು ನಾಟಕದ ಕುರಿತು ನಿರ್ದೇಶಕ ಚಿದಂಬರರಾವ್ ಜಂಬೆ ರವರೊಂದಿಗೆ ಮಾತುಕತೆ.


 

ನಾಟಕವನ್ನು ಹಿಂದೆ ಯಾರಾದರೂ ಮಾಡಿದ್ದಾರಾ?
೧೯೮೭ ರಲ್ಲಿ ನೀನಾಸಂ ತಿರುಗಾಟಕ್ಕೆ ನಾನೇ ನಾಟಕವನ್ನು ನಿರ್ದೇಶಿಸಿದ್ದೆ.

ಯಾಕೆ ನಾಟಕವನ್ನೂ ಆಯ್ಕೆ ಮಾಡಿಕೊಂಡಿದ್ದೀರಿ?
ಎಲ್ಲಾ ಕಲಾವಿದರಿಗೆಲ್ಲರಿಗೂ ಅಭಿನಯಿಸಲು ಅವಕಾಶ ವಿರುವುದರಿಂದ ನಾಟಕವನ್ನು ಆಯ್ಕೆ ಮಾಡಿಕೊಂಡೆ. ಹಾಗೂ ನಾಟಕದಲ್ಲಿ ಅಭಿನಯ ಸಾಧ್ಯತೆಗಳು ಹೆಚ್ಚಾಗಿವೆ. ಹಾಗೂ ಕೆಳವರ್ಗದ ಜನಸಮುದಾಯವನ್ನು ಗುರುತಿಸಿ ಅವರ ಬದುಕಿನ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ನಾಟಕ ಮಾಡುವುದರಿಂದ ನಾಟಕ ನನಗೆ ಇಷ್ಟವಾಯಿತು.


ನಾಟಕದ ಮೂಲಕ ನೋಡುಗರಿಗೆ ಏನು ಹೇಳಬೇಕು ಎಂದು ಬಯಸಿದ್ದೀರಿ?
ಬೇರೆ ನಾಟಕಗಳು ಕಥಾ ಪ್ರಧಾನವಾದಂತವುಗಳು. ಆದರೆ ನಾಟಕ ಕಥೆ ಇಲ್ಲದಿದ್ದರೂ ಪ್ರತಿ ಪಾತ್ರವೂ ಒಂದೊಂದು ಕಥೆಯ ಹಿನ್ನಲೆಯನ್ನು ಹೊಂದಿರುವಂತಹವು. ದರಿದ್ರರ ಬದುಕಿನಲ್ಲಿ ಆತ್ಮವಿಶ್ವಾಸವನ್ನು ತುಂಬುವುದನ್ನು ನಾಟಕ ಹೇಳುತ್ತದೆ.


ನಿರಾಶಾವಾದದ ಪ್ರಚೋದನೆ ನಾಟಕದಲ್ಲಿದೆಯಲ್ಲಾ?
ಅಂತಾದ್ದೇನು ಇಲ್ಲಾ. ಕೊನೆಗೆ ನಟ ಪಾತ್ರದಾರಿ ನೇಣು ಹಾಕಿಕೊಳ್ತಾನಷ್ಟೇ. ಅವರೆಲ್ಲಾ ಬದುಕನ್ನು ಕಳೆದುಕೊಂಡ ಪಾತ್ರಗಳು. ನಿರಾಶೆಯಲ್ಲೇ ಬದುಕುವ ಪಾತ್ರಗಳವು. ನಿರಾಶಾವಾದ ಎಲ್ಲಿಂದ ಬರಬೇಕು.

ಯಾವ ಪಾತ್ರಗಳೂ ಕೊನೆಗೂ ಪರಿವರ್ತಗೊಳ್ಳುವುದೇ ಇಲ್ಲವಲ್ಲಾ?
ಬದಲಾವಣೆ ಎನ್ನೋದನ್ನ ಪ್ರತ್ಯಕ್ಷವಾಗಿ ತೆಗೆದುಕೊಳ್ಳಲಾ ಗೋದಿಲ್ಲ. ಬದಲಾಗದೇ ಇರಬಹುದು. ಆದರೆ ಲಕ್ಕಜ್ಜ ಪಾತ್ರ ಬಂದು ಎಲ್ಲರಲ್ಲೂ ಆತ್ಮವಿಶ್ವಾಸ ತುಂಬಿ ಹೋದ ನಂತರ ಕೆಲವು ಪಾತ್ರಕ್ಕಾದರೂ ಅವನು ಹೇಳಿದ್ದು ಸರಿ ಎನ್ನಿಸುತ್ತದೆ. ಮುದುಕ ಹೋದ ಮೇಲೆ ಕೆಲವರನ್ನಾದರೂ ಕಾಡ್ತಾನೆ. ಅದೇ ನಾಟಕದ ಪರಿಣಾಮ.

ನಾಟಕ ಯಾವುದೇ ಪರಿಹಾರ ಕೊಡೋದಿಲ್ಲವಲ್ಲಾ?
ಗಾರ್ಕಿಯ ಉದ್ದೇಶವೇ ಯಥಾಸ್ಥಿತಿಯನ್ನು ತೋರಿಸುವು ದಾಗಿದೆ. ನೇರವಾಗಿ ಪರಿಹಾರವನ್ನು ಸೂಚಿಸುವುದು ಅವನು ಮಾಡಿಲ್ಲ. ಯಾರೂ ಪರಿಹಾರ ಸೂಚಿಸೋಕಾಗೊಲ್ಲ. ಅವರವರ ಪರಿಹಾರವನ್ನು ಅವರವರೇ ಕಂಡುಕೊಳ್ಳಬೇಕು.


ಇಲ್ಲಿ ಯಥಾಸ್ಥಿತಿ ಮಾತ್ರ ಅನಾವರಣಗೊಂಡಿದೆಯಲ್ಲಾ?
ಇಂದು ಯಾರೂ ಯಾರನ್ನೂ ಮೇಲೆ ಎತ್ತೋ ಸ್ಥಿತಿಯಲ್ಲಿ ಇಲ್ಲ. ಎಚ್ಚರವನ್ನು ಮೂಡಿಸುವುದಷ್ಟೇ ನಮ್ಮ ಕೆಲಸವೇ ಹೊರತು ಬದಲಾವಣೆ ತರುತ್ತೇವೆ ಅನ್ನೋದು ಸರಿಯಲ್ಲ. ಬದಲಾವಣೆ ಆಗಬೇಕು ಎಂದು ಬಯಸೋದು ಸರಿ. ನಮ್ಮನ್ನು ನಾವು ಬದಲಾಯಿಸಿಕೊಳ್ಳಲು ಸಾಧ್ಯವಾಗಬೇಕು.


ನಾಟಕದಿಂದ ಬದಲಾವಣೆಯಾಗುವುದಿಲ್ಲ ಎಂದರೆ ನಾಟಕ ಮಾಡಿಸೋದ್ಯಾಕೆ?
ನಾಟಕ ಮಾಡಿಸೋದರಿಂದ ಬದಲಾಣೆ ಆಗುತ್ತೆ ಅನ್ನೋ ನಂಬಿಕೆಯೂ ನನಗಿಲ್ಲ. ನಾನು ನನ್ನ ಹೊಟ್ಟಿಪಾಡಿಗಾಗಿಯೇ ನಾಟಕ ಮಾಡಿಸೋದು. ಸೂಕ್ಷ್ಮ ಸಂವೇದನೆಗಳು ಒಳ ಪರಿಣಾಮವನ್ನುಂಟು ಮಾಡುತ್ತವಾದರೂ ನಾಟಕದಿಂದ ಬದಲಾವಣೆ ಸಾಧ್ಯವಿಲ್ಲ. ನಾಟಕ ಮಾಡೋದರಿಂದ ಪರಿಣಾಮ ಆಗೋದೆ ಇಲ್ಲಾ ಅಂತಾ ಅಲ್ಲ. ಆದರೆ ನಾಟಕದಿಂದಲೇ ದೇಶ ಉದ್ದಾರ ಆಗುತ್ತೆ ಅಂತಾನೂ ಇಲ್ಲ. ನಾನು ನಾಟಕ ಮಾಡೋದ್ಯಾಕೆಂದರೆ ರಂಗಭೂಮಿ ನನಗೆ ಮನುಷ್ಯ ಸಂಬಂಧಗಳನ್ನು ಕಲಿಸಿದೆ. ಇಷ್ಟು ನಂಬಿಕೆ ನನಗೆ ನಾಟಕದ ಮೇಲಿದೆ. ನಾಟಕ ಮಾಡೋದರಿಂದ ಯಾರಿಗಾದರೂ ಅಂತರಂಗದಲ್ಲಿ ಏನಾದರೂ ಅನ್ನಿಸಿದರೆ ನಾಟಕದ ಸಾರ್ಥಕತೆ.

ನಾಟಕದಲ್ಲಿ ವಿನೋದವೇ ಹೆಚ್ಚಾಗಿ ಅಗತ್ಯವಾಗಿದ್ದ ವಿಷಾದ ಡೈಲೂಟ್ ಆಗಿದೆ ಅಂತಾ ಅನ್ನಿಸುತ್ತಲ್ಲ?.
ಹೌದು, ನಾನು ಕಲಾವಿದರಿಗೆಲ್ಲಾ ಹೇಳಿದ್ದೆ ನಾಟಕ ನೋಡಿದವರ ಕಣ್ಣಲ್ಲಿ ನೀರು ಬರುವ ಹಾಗೆ ಆದರೆ ನಾನು ನಾಟಕ ಮಾಡಿಸಿದ್ದು ಸಾರ್ಥಕ ಅಂತ.  ಜನ ನಗ್ತಾರೆ ಅಂತಾ ಕಲಾವಿದರು ಉತ್ತೇಜಿತರಾದರೆ ನಾಟಕ ಸೋಲ್ತದೆ ಅಂತ. ನಗಿಸೋದನ್ನೇ ಮಾಡ್ತಾ ಹೋದರೆ ಅದು ನಾಟಕಕ್ಕೆ ಅಪಚಾರ ಆಗ್ತದೆ.

ನಾಟಕದ ಮರು ಪ್ರದರ್ಶನಗಳು...?
ಒಟ್ಟಾರೆ ಸುಮಾರು ೧೮ ಪ್ರದರ್ಶನಗಳನ್ನು ರಾಜ್ಯಾದ್ಯಂತ ಆಯೋಜಿಸಲಾಗಿದೆ. ಕೇವಲ ಗುರುನಾನಕ ಭವನದಲ್ಲಿ ಮಾಡಿ ಮುಗಿಸಿದರೆ ಏನೂ ಪ್ರಯೋಜನ ಇಲ್ಲ. ಅದಕ್ಕೆ ನಾಡಿನಾದ್ಯಂತ ರೆಪರ್ಟರಿ ತಿರುಗಾಟದ ಮಾದರಿಯಲ್ಲಿ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಇದರಿಂದ ಕಲಾವಿದರಿಗೆ ಹೆಚ್ಚಿನ ಅನುಭವ ಮತ್ತು ಭಿನ್ನ ರೀತಿಯ ಪ್ರೇಕ್ಷಕರ ಪ್ರತಿಕ್ರಿಯೆ ದೊರೆಯುತ್ತದೆ. ಹೆಚ್ಚು ಹೆಚ್ಚು ಕಲಿಯಲು ಅವಕಾಶವಾಗುತ್ತದೆ.

ಕಾರ್ಯಾಗಾರದ ಉದ್ದೇಶವೇನು?
ನಟರು, ತಂತ್ರಜ್ಞರನ್ನು ತರಬೇತಿಗೊಳಿಸುವುದರ ಜೊತೆಗೆ  ನಾಟಕವನ್ನು ನಿರ್ಮಿಸುವುದು.

ಕಾರ್ಯಾಗಾರದ ಯೋಜನೆ ಹೇಗೆ ?
೧೫ ಜನರನ್ನು ನಟನೆಗಾಗಿ  ಹಾಗೂ ಜನರನ್ನು ನೇಪತ್ಯದ ಕೆಲಸಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಯಿತು. ತಿಂಗಳನ್ನು ೪೫ ದಿನಗಳ ವಿಭಾಗವಾಗಿಸಿದೆವು. ಮೊದಲ ೪೫ ದಿನಗಳ ಕಾಲ ಅಭಿನಯದ ಕಲಿಕೆ (ಆಕ್ಟಿಂಗ್ ಇನ್ಪುಟ್ ಕ್ಲಾಸ್) ಮತ್ತು ರಂಗವಿನ್ಯಾಸದ ತರಬೇತಿ (ಡಿಸೈನ್ ಇನ್ಪುಟ್ ಕ್ಲಾಸ್), ಆಮೇಲೆ ೪೫ ದಿನಗಳಲ್ಲಿ ಏನೇನು ಕಲಿತಿದ್ದಾರೋ ಅದನ್ನು ಬೇರೆ ಬೇರೆ ನಿರ್ದೇಶಕರ ಮಾರ್ಗದರ್ಶನದಲ್ಲಿ ಅಳವಡಿಸಿಕೊಳ್ಳುವಿಕೆ (ಇಂಪ್ಲಿಮಿಂಟೇಶನ್ ಕ್ಲಾಸ್), ಮತ್ತೆ ೪೫ ದಿನಗಳ ಕಾಲ ನಾಟಕವೊಂದರ ತಾಲಿಂನಲ್ಲಿ ತೊಡಗಿಸಿಕೊಳ್ಳಬೇಕು. ಕೊನೆಗುಳಿದ ದಿನಗಳು ಕಲಾವಿದರಿಗೆ ಯದ್ದಕ್ಷೇತ್ರ. ನಾಡಿನಾದ್ಯಂತ ನಾಟಕದ ಪ್ರದರ್ಶನ. ನಾಟಕದೊಂದಿಗೆ ಸತ್ಯಕ್ಕೆ ಕಲಾವಿದರು ಮುಖಾಮುಖಿಯಾಗ್ತಾರೆ. ೨೦ ಜನ ಯುವಕರನ್ನು ರಂಗಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸುವ ಪ್ರಯತ್ನ ಮಾಡಲಾಯಿತು.

ಕಾರ್ಯಾಗಾರದ ಒಟ್ಟು ಬಜೆಟ್ ಎಷ್ಟು?
ಆರು ತಿಂಗಳ ಕಾಲದಲ್ಲಿ ಆಯ್ಕೆಯಾದ ಎಲ್ಲರಿಗೂ ಊಟ, ವಸತಿ, ತರಬೇತಿ, ಸಂಬಳ... ಇತರೆ ಎಲ್ಲಾ ಸೇರಿ ೩೮ ಲಕ್ಷದ ಬಜೆಟ್ ಮಾಡಲಾಗಿದೆ.

ಹಿಂದೆನೂ ಕಾರ್ಯಾಗಾರ ಮಾಡಲಾಗಿತ್ತಲ್ಲಾ?
ಹೌದು, ೨೦೧೦ ರಲ್ಲಿ ತಿಂಗಳ ಅಭಿನಯ ಕಾರ್ಯಾಗಾರ ಮಾಡಿದ್ದೆವು, ಆಮೇಲೆ ಮತ್ತೆ ತಿಂಗಳು ರಂಗತಾಂತ್ರಿಕ ಕಾರ್ಯಾಗಾರವನ್ನು ಮಾಡಿದೆವು. ಈಗ ಎರಡನ್ನೂ ಸಮನ್ವಯಗೊಳಿಸಿ ತಿಂಗಳ ಕಾರ್ಯಾಗಾರವನ್ನು ಆಯೋಜಿಸಿದೆವು.


ಕಾರ್ಯಾಗಾರದ ನಂತರ ೨೦ ಜನ ತರಬೇತಾದವರನ್ನು ಏನು ಮಾಡುವುದು?
ತರಬೇತಿ ಕೊಡುವುದಷ್ಟೇ ನಮ್ಮ ಕೆಲಸ. ಮುಂದೇನು ಏನೂ ಮಾಡೋಕೆ ಆಗೋದಿಲ್ಲ. ಎನ್ಎಸ್ಡಿ ಯವರೇ ಸಾಧ್ಯವಾದರೆ ಒಂದು ರೆಪರ್ಟರಿ ಮಾಡಬೇಕು. ಅದು ಅವರಿಗೇ ಬಿಟ್ಟಿದ್ದು. ನನಗೆ ಕೊಟ್ಟಿರೋ ಅಸೈನ್ಮೆಂಟ್ ಇಷ್ಟೇ ತಿಂಗಳ ಕಾರ್ಯಾಗಾರ.

ಶಿವಸಂಚಾರ ಮತ್ತು ನೀನಾಸಂನಿಂದ ತರಬೇತಾದವರು ಆಮೇಲೆ ಅತಂತ್ರರಾಗಿದ್ದಾರಲ್ಲಾ?
ಅವರಿಗೆ ಅವರವರ ಮಠ ಹಾಗೂ ಸಂಸ್ಥೆಗಳನ್ನು ಬೆಳೆಸುವುದು ಮಾತ್ರ ಮುಖ್ಯವಾಗಿರುತ್ತದೆಯೇ ಹೊರತು ನಟರನ್ನು ತಂತ್ರಜ್ಞರನ್ನು ಬೆಳೆಸುವುದಲ್ಲ. ಎರಡೂ ಸಂಸ್ಥೆಗಳು ಒಂದೇ.

ವರ್ಕಶಾಪ್ ಕಾನ್ಸೆಪ್ಟ್  ಯಾರದ್ದು ?
ನಾನು ಮತ್ತು ಸಾಗರದ ಪ್ರಸನ್ನ.ಡಿ ಇಬ್ಬರೂ ಸೇರಿ ಇಡೀ ಕಾರ್ಯಾಗಾರದ ರೂಪರೇಷೆಗಳನ್ನು ರೂಪಿಸಿದೆವು. ನಿಶ್ಚಿತ ಯೋಜನೆ ಇಟ್ಟುಕೊಂಡು ಹೊರಟಿದ್ದು ಕಾರ್ಯಾಗಾರದ ಯಶಸ್ಸಿಗೆ ಕಾರಣವಾಯಿತು

                                        -ಶಶಿಕಾಂತ ಯಡಹಳ್ಳಿ


 


 













ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ